ಕೆ. ವಿಠ್ಠಲ್ರಾವ್
ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಅಂಡ್ ಲೀಗಲ್ ಅಡ್ವೈಸರ್
ಶ್ರೀ ಖಾಡಿಲ್ಕರ್, ಎಲ್ಲರಿಗೂ ನಮಸ್ಥಾರ. ಸಂಸ್ಥೆಯು ತೆಗೆದುಕೊಳ್ಳಲು ನಿರ್ಧಸಿರುವ ಒಂದು ಪ್ರಮುಖ ಯೋಜನೆಯ ಬಗ್ಗೆ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಹರ್ಷಿಸುತ್ತೇನೆ. ನಿಮಗೆಲ್ಲಾ ತಿಳಿದಿರುವಂತೆ ಜರ್ಮನಿಯ ನನ್ನ ಹಿಂದಿನ ಭೇಟಿಯ ಸಂದರ್ಭದಲ್ಲಿ, ಏರ್ಕ್ರಾಫ್ಟ್ನ ಟ್ರಾನ್ಸ್ಮಿಷನ್ ಬಿಡಿಭಾಗಗಳನ್ನು ಉತ್ಪಾದಿಸಲು ಮತ್ತು ಸರಬರಾಜು ಮಾಡುವ ಬಗ್ಗೆ ಬೆಕ್ಸ್ಟೀರ್ನೊಂದಿಗೆ ಒಂದು ಕರಾರಿಗೆ ಸಹಿ ಮಾಡಿರುತ್ತೇನೆ. ಆ ಬಿಡಿಭಾಗವು ನವೀನ ತಾಂತ್ರಿಕತೆಯೊಂದಿಗೆ ಅತ್ಯಂತ ಕ್ಲಿಷ್ಟಕರವಾದದ್ದಾಗಿರುತ್ತದೆ. ನಮ್ಮ ಸಂಸ್ಥೆಯು ಅಂತಹ ಬಿಡಿಭಾಗವನ್ನು ಉತ್ಪಾದಿಸಿ ರಫ್ತು ಮಾಡುವ ಮೊದಲನೇ ಸಂಸ್ಥೆಯಾಗಿರುತ್ತದೆ. ಅಂದಾಜಿನ ಪ್ರಕಾರ, ನಮಗೆ ಬೇಡಿಕೆ ಆದೇಶ ಬಂದಲ್ಲಿ, ನಮ್ಮ ಉತ್ಪಾದನಾ ಸಾಮರ್ಥ್ಯದ ಬಳಕೆಯು ಶೇಕಡ 85ರಷ್ಟಕ್ಕೆ ತಲುಪಬಹುದು ಮತ್ತು ಲಾಭಾಂಶವೂ ಸಹ ಉತ್ತಮವಾಗಿರುತ್ತದೆ.
Advertisements